ಬುಧವಾರ, ಏಪ್ರಿಲ್ 10, 2013

ಮಾರಮ್ಮನ್ ಗುಡಿ

ಕಬ್ಬು ತೊಂಡೆ ಒತ್ತಕಂಡ್ ಹೈವಾಗಾ
ಹಸರು ಗರಿ ಮಧ್ಯದಿಂದ ಇಣಕಿ ನೋಡ್ದೇ
ಮೂರ್ ಕಳ್ದು ಆರು ಉಗಾದಿ ಬಂದೋ
ಇನ್ನೋದ್ ಗಿತ ಬಾರೋ
ತೊಂಡೆ ಒತ್ತಕಂಡು ನಮ್ಮ ಬೀದಿ ಕಡೆಗೆ


ಅಸಿಗೆ ಮೈತೊಳಿವಾಗ ಮೈ ಉಜ್ಜುತ್ತಿದ್ ಉಲ್ ಗೆ
ನೀರ್ ಅದಿ ಮಕ್ಗೀಗ್ ನೀರ್ ಎರ್ಚ್ ದೋನೆ
ನೀರ್ ಒಳಗೆ ಕಾಣದಂಗಾದ ಸೌಟು ತಕೊಟ್ಟೋನೆ
ಎರಡ್ ಮಳ್ಗಾಲ ಕಳ್ದು ನಾಲ್ಕ್ ಸತಿ ಹಳೆ ಕಾವಲಿಗೆ ನೀರ್ ಬುಟ್ಟರು
ಬೆಳಗುದ್ದ ತಪಲಿ ಬೆಳಿಕಡು ಕೊಂತಿವ್ನಿ
ಅಸ ಹೋಡ್ಕಂಡು ಇನ್ನೋಂದ್ ಗಿತ ಬಾರೋ ಕೆರೆ ಕಡೆಗೆ


ಕಿವುಡ್ ನಾರಾಯಣ ಬಂದ ಪ್ಯಾಟಿ ಗಂಡ್ ತಂದ
ಒಂದೇ ದೀಪಾವಳಿಗೆ ಕೊಟ್ಟಿ, ಕರ್ದೀ-ಕಳ್ಸುದ್ರು
ಆಸಾಢಕ್ಕೆ ಅವ್ವನ್ ಮ್ನಗೆ ಕಳ್ಸವರೇ..
ತೌವರ್ರೂರ್ ಹಬ್ಬದಾಗೆ ತಂಬಿಟ್ಟ ಆರತಿ ತರುವಾಗ ಕಂಡೆ
ಮಾರವ್ವನ್ಗೆ ಹಚ್ಚುದ್ ದೀಪದಾಗೆ ನನ್ನ ಕಣ್ಣೇರ್ ಕಂಡೆ
ತಮ್ಮಟೆ ಸದ್ದ ಇದ್ದರು ನನ್ನ ಗುಂಡಿಗೆ ಸದ್ದ್ ಗೊತ್ತ್ ಮಾಡ್ಕಂಡೆ


"ಒಂಟೋಗಣ" ಬಮ್ಮಿ
ತಡರಾತ್ರಿ ಬಾಯಿಬೀಗ ಚುಚ್ಚುಸ್ಕಳೊ ಹೊತ್ತಗೆ
ಗಾಡಿ ಕಟ್ಟಿ, ಒಣಹುಲ್ಲ್ ಹಾಸಕಂಡಿ ಕಾಯ್ತಾ ಕೊಂತಿರ್ತೀನಿ
ಊರ್ ಮುಂದ್ಲು ಮಾರಮ್ಮನ್ ಗುಡಿ ಮುಂದೆ


           -ಹರವು ಸ್ಫೂರ್ತಿಗೌಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ