ಮಂಗಳವಾರ, ಏಪ್ರಿಲ್ 23, 2013

ಎದೆಯು ಮರಳಿ ತುಡಿಯುತಿದೆ
ಎಂದೋ ನಿಂತಿತೆಂದರೆ
ಬಳ್ಳಿ ಬಾಳು ಹಬ್ಬಲು
ಅರಳಿ ಹೂ ನಗಲು
ಎಲ್ಲೋ ನಿಂತ ಕಾಲ
ಯಾರೊಡನೆಯೋ ಕಂಡ ಕನಸು
ನೆನಪುಗಳೆಲ್ಲ ಕಡಲಾಗಿದೆ
ಮರೆಯಾಗಿ ಹೋಗು
ಮುಳುಗುವ ನೇಸರನಂತೆ
ತೇರು ಹರಿದು
ಕೊರಗು ಅರಿದು
ಸ್ಪಷ್ಟವಲ್ಲದ ಸಂಬಂಧಗಳು
ನಾಜೂಕಿನ ಬಿರುಕುಗಳು
ಅಗಲಿರಲು ಹೀಗೆ ನಾವು


  -ಹರವು ಸ್ಫೂರ್ತಿಗೌಡ
ಬರೆದಷ್ಟೂ ತೀರದು
ನೋಡಿದಷ್ಟೂ ಪ್ರೀತಿ
ಕಣ್ಮುಚ್ಚಿದಷ್ಟೂ ಕನವು
ಮರಳಿ ಪಡೆಯುವುದಷ್ಟೇ ಬಾ
ಮುಗಿಯದ ರಾತ್ರಿ ತುಂಬ
ತೀರದ ಬಾಳಿನ ತುಂಬ

 -ಹರವು ಸ್ಫೂರ್ತಿಗೌಡ
ಹರಿಯದ ಪ್ರೀತಿ ನೀರು
ನಿಂತಿತು ಮನದಲ್ಲಿ
ಕೊಳದೊಳಗೆ ಜಾರಿದಂಗೆ
ಜಾರಿದೆ.. ಕಾಣದಾದೆ
ನನ್ನದೇ ಹೃದಯ ಕೊಳದೊಳಗೆ
ಎಲ್ಲವನ್ನ ಖಾಲಿ ಮಾಡಬೇಕಿದೆ
ಒಂದೊಂದೇ ಹನಿ ಹರಿಸಿ
ಕಣ್ಣಿನಿಂದ...

- ಹರವು ಸ್ಫೂರ್ತಿಗೌಡ
ಬಿರುಬಿಸಿಲಿನಲ್ಲಿ ನಡೆದ ನೆನಪು
ಭಾರೀ ರಣಹದ್ದು ಕಣ್ಣುಗಳು
ಕೆಂಪಿನ ಹೂ ನಡುವೆ
ಮೋಸದ ಮುಳ್ಳುಗಳು
ನಂಬಬೇಡ ಎನ್ನುವ
ಬುದ್ಧಿಯ ನಡುವೆ
ಮರೆಯಲಾರೆ ಎನ್ನುವ ಹೃದಯ
ಯಾರನ್ನ ಕೇಳಲಿ…?

 -ಹರವು ಸ್ಪೂರ್ತಿಗೌಡ
ಕವಿದಂತೆ ಮಂಜು ಈ ಕಣ್ಣಿಗೆ
ಪ್ರೀತಿ ಸೂರ್ಯ ಶಾಖ
ಕರಗಿಸಬಹುದೇನೋ
ಕರಗಲಾರೆ
ಕಣ್ಣೀರಾಗಿ ಸುರಿಯುವ ಭಯ!

-ಹರವು ಸ್ಫೂರ್ತಿಗೌಡ

ನಿತ್ರಾಣ ದೇಹಕ್ಕೆ
ಪ್ರಾಣ ಉಸಿರಾಗುವೆ

ಉರಿಗಣ್ಣಿಗೆ
ಹೊಸ ಕನಸ ಕಟ್ಟುವೆ

ಹಸಿವು ದಾಹಕ್ಕೆ
ಪ್ರೀತಿ ತುಟಿಯ ತುಂಬುವೆ

ಬರುಡು ಬಿಸಿಲ ಬಾಳಲ್ಲಿ
ತೋಳು ನೆರಳಿಂದ ಮುದ್ದಿಸುವೆ

ಭೈರಾಗಿ ಅಲೆಯದಿರು
ತಲೆಗೂದಲಾಸಿ ಮಲಗಿಸುವೆ

ಬಯಸುವ ಬಣ್ಣದ ಸೀರೆ
ಮೆಚ್ಚುವ ಲೋಕ ಸೃಷ್ಠಿಸಿ

ಇಷ್ಟ ಮಲ್ಲಿಗೆ ಅಮಲು
ಮೆಚ್ಚಿದ ಮಡದಿ ಮಡಿಲು

ಮರೆಯದಿರು..
ನಿನ್ನೊಂದು ನಗುವಿಗಾಗಿ
ಅಮೃತಧಾರೆಯೇ ನನಾಗುವೇ

-ಹರುವು ಸ್ಫೂರ್ತಿಗೌಡ
  23-04-2013

ಶುಕ್ರವಾರ, ಏಪ್ರಿಲ್ 19, 2013

ಬೆಳ್ಳಿ ಚುಕ್ಕಿ ಹೆಕ್ಕಿ ಹೆಕ್ಕಿ..
ಗುಡಿಸ್ಲು ಬಾಗ್ಲು ಮುಂದೆ ಜೋಡುಸ್ತೀನಿ
ಚಂದ್ರನ ಎಳಕಂಡ್ಬಂದು
ಸೂರು ತೊಲೆಗೆ ಕಟ್ತಿನಿ
ಮುನಿಸ್ಕಂಬೇಡ ಕಣವ್ವ...


ಒಂದು ದಿನ ಕುಡಿದ್ರೇ ನಶೆ ಬರಕಿಲ್ಲ
ದಿನಾ ಕುಡಿದ್ರೇ ನಾನು ಕುಡುಕಾಲ್ಲ
ಫೋಟೊದಿಂದಲಾರು ನಕ್ ಬುಡು
ನಾನು ಹೊಡ್ದೆಅಂತ ನೀನು ಸಾಯ್ಲಿಲ
ನೀ ಸತ್ತೆ ಅಂದ್ರೆ ನಾನು ಕೊಲೆಗಡುಕ ಅಲ್ಲ!
       
 -ಹರವು ಸ್ಫೂರ್ತಿಗೌಡ
"ಅಪೂರ್ಣರಘುನಂದನ"

ಚಿಂತೆ ಸಂಪಿಗೆ ಮುಡಿದಳು
ರಾಮ ನಾಮದ ಘಾಟು ಗಮಲು ಒಡಲಲ್ಲಿ

ಗೆದ್ದವನಿಗೆ ಉಡುಗೊರೆಯಾದಳು

ಗೆಲುವುದೊಂದೇ ಗೊತ್ತು ಅವಕ್ಕೆ

ವಿರಹ ತಣಿಸದ
ಮೋಹದ ಗಂಡನಾಗಿ ಉಳಿದ

ಯಾವುದೋ ಯುಗದಲ್ಲಿ
ಯಾರದೋ ಅಶೋಕವನದಲ್ಲಿ
ಯಾರಿಗಾಗಿ ಶೋಕಿಸಿದಳು ಸೀತೆ..


-ಹರವು ಸ್ಫೂರ್ತಿಗೌಡ
ಬೇಕು-ಬೇಡಗಳ ನಡುವೆ.. ಕೆಲವು 'ಯಾಕೆ'ಗಳು

ದೇವರನ್ನ ನಂಬಲಿಲ್ಲ
ಪ್ರೀತಿಯಲ್ಲಿ ಶಂಕೆ ಇಲ್ಲ ಯಾಕೆ?

ಮುಖ ಕಂಡರೇ ಆಗಲ್ಲ
ಮುಂದೆ ಹೋದರೆ ತಿರುಗಿ
ಹಿಂದೆ ನೋಡೋದು ಯಾಕೆ?

ಮಾತು ಬಿಟ್ಟರು
ಮೌನದಲ್ಲಿ ಒಂಟಿ ಯಾಕೆ?

ಕೊಟ್ಟ ಮುತ್ತು
ಬರೀ ಶಬ್ಧವಾಗೋದು ಯಾಕೆ?

ಅಪ್ಪಿದ ತೋಳುಗಳು ಬಂಧನವಾಗದೆ
ಬಂಧಿಆಗೋದು ಯಾಕೆ?

ಕಳದೇ ಹೋದರು
ಗುರುತು ಸಿಗುತಿದೆ ಯಾಕೆ?

ಸತ್ತಾತ್ಮದೊಡನೆ
ಸಹವಾಸ ಯಾಕೆ?

-ಹರವು ಸ್ಫೂರ್ತಿಗೌಡ

ಬುಧವಾರ, ಏಪ್ರಿಲ್ 17, 2013

HgÀÄ.. Hj£À PÀxÉ

ªÀģɪÀÄUÀ HgÀÄ §ÄlÖ
Hj£À PÁqÀÄ ZÀ°¸ÀvÁÛªÉÇ
HgÀÄ ªÀÄÄAzÀPÉÌ ¨É½vÁªÉÇ
UÉÆÃzsÉƽ J©â¹wÛzÀÝ ©Ã¢ mÁgÁUÀªÉÃ
PÉÆnÖUÉAiÀÄ°èlÖ £ÉÃV®Ä
ElÖAUÉ ElÖ¯Éà ªÀÄtÚ»rvÉÆÃ

UÀzÉÝ ²ÃvÀ »r¹ÛzÀÝ PÁªÉÃj
ºÀjvÁ GgÀļÁÛ PÁtzÀAUÁzÀÄè
¥À®èUÀlÖ¯É ºÁ®ÄPÀlÄÖwÛzÀ ¨sÀvÀÛ
MtVzÀ ¥ÉÊgÁV eÉƼÀÄî GzÀÄjzÉÆ
PÉÃjUÉ®è ªÀvÀð£ÉAiÀiÁVzÀÝ UËj ºÁ®Ä
¸ÉÆjPÀAr, ¸ÀÄAqÉÆUÀªÉî..

HgɯÉè¯Á ºÀÆ CgÀ¼ÁÝUÀ
PÀ£ÁßA¨Ár ºÀ§â PÀmÉÆÖÃgÀÄ
ºÀÆ CgÀ½®è, eÁvÉæ PÀlÖ°è®
ºÀ§â ªÀiÁqÀPÉ ªÀÄ£Éð ªÀÄPÀ̽®è

HgÀÄ vÀÄA¨Á ªÀÄÄzÀÄPÀÄæ
UÀAqÀ ¸ÀvÀÛ ªÀÄÄAqÉÃgÀÄ
©Ã¢ ªÀÄuÁÚPÀ¼ÉÆà ªÀÄPÀ̼ÀÄ
ºÀgÀ½PÀmÉÖ ¸ÀÄvÉÆÛ ºÉtÚªÀÄPÀ̽®è
PÀ©â£À UÁr ºÉÆrwÛzÀÝ UÀAqÀäPÀ̽®è
¥ÁåmÉ ¸ÉÃj, ºÀ½î GzÁÞgÁVè®è CAvÀªÉ..

MAzÀÄ PÉýzÀgÉ £ÀÆgÀÄ ºÉýÛAiÀÄ®è AiÀiÁªÀÇgÀÄ

£ÀÆgÀÄ ºÉýzÉæãÀÄ..
PÀ¥Àà PÀvÀ󨏡 ¸Á«gÀ PÀxÉ..
PÀÄgÀÄqÀPÀAqÀ.. QªÀÅqÀ PÉüÀÝ
ºÉÆmÉÖ vÀÄA¨ÉÆÝÃgÀÄ PÀtÚ¥Àà
MAzÀÆgï PÀvÉ £ÀÆgÁvÀÄ..
ªÀÄAqÀåzÀvÀæ ºÀgÀªÉÇßãÀÄ...!

-ºÀgÀªÀÅ ¸ÀÆáwðUËqÀ

ಬುಧವಾರ, ಏಪ್ರಿಲ್ 10, 2013

ಬದಲಾದಂತೆ ಭಾವ

1. ಅವನ ಭಾವ

ಚುಂಬಕ ಮೊಗ್ಗು
ನಾಚಿಕೆ ಕರೆಸಿ
ಹೂವಿನ ನಗು ಆಕಳಿಸಿ ಅರಳಿನಿಂತಂತೆ
ಮಾತಿನ ಬಿಸಿಲರಶ್ಮಿಗೆ
ನಗು ಬರಿಸಿ..

ಉನ್ಮಾದ ಕರೆಸಿ..
ಕಿವಿ ರೋಮ ಪುಳಕಗೊಂಡಂತೆ
ನಡುನತ್ತಿಯ ಸೂರ್ಯಕ್ಕೆ
ಚುರುಕು ಬೆಳಕಲಿ ಎಲ್ಲಾ ತಿಳಿದಂತೆ
ಅರಳುವಿಕೆಯ ಅರ್ಥ

ಬಿರಿಯುವುದರಲ್ಲಿ ಏನಿನ್ನಲ್ಲ ವಿಶೇಷತೆ
ಸಮಷ್ಠಿಯೂ ಸಿಕ್ಕ ಗೆಲುವಿನ ಮದ
ಅರಳಿ ನಾಚಿದ ಪ್ರತಿ ಪಳಿಕೆ ಆಳ ಅರಿತ
ಅವನದೇ ರಶ್ಮಿಗೆ ಅರಳಿದ ಹೂ ಅದು
ಅವನಿಗೇನು ಹೊಸತನ ನೀಡಲಿಲ್ಲ ಮತ್ತೆ ಮತ್ತೆ
ಪಶ್ಚಿಮಕ್ಕಿತ್ತು ಅವನ ಮುಖ
ಸಂಜೆಗೆ ಕರಗುವ ಮುನ್ನವೂ
ಕಣ್ಣಾಯಿಸಲಿಲ್ಲ
ಕಡಲ ಕಿನ್ನಾರೆಗಳಿಗೆ ಗುಸುಕಿದನಂತೆ
ಅರುಣೋದಯಕ್ಕೆ ಅರಳಿದವಳಲ್ಲಿ
ಸಂಧ್ಯಕ್ಕೆ ಹೊಸತೇನಿಲ್ಲ


2. ಅವಳ ಭಾವ

ಪ್ರೀತಿ ಹಣ್ಣು ತಿಂದು ಉಗಿದರು
ಒಡೆದು, ಚಿಗುರಿ, ಮೌನವಾಗುವಿಕೆಯಲ್ಲಿ..
ಹೃದಯದಲ್ಲಿ ಬಿತ್ತಿದ ಬೀಜದಂತೆ
ಪ್ರತಿ ಕಣದಲ್ಲೂ ವಿಶಿಷ್ಠತೆ ಸಾರುವ ಅರಳಿಯಂತೆ
ತನ್ನ ಒಡಲಲ್ಲಿ ಮತ್ತೊಂದು ಸಾಕುವ ಬಸುರಿಮರದಂತೆ
ಅಂತರಾಳಕ್ಕೆ ಭಾವಗಳ ಬೇರಿಳಿಸಿ ಬೆಳೆವ ಆಲದಂತೆ
ಮಣ್ಣ ಅಪ್ಪಿ ತಾನು ಬೆಳೆದು..
ತನ್ನತನವ ಗಟ್ಟಿಗೊಳಿಸುವ ಹೆಣ್ಣು ಜೀವಂತೆ
ಪ್ರತಿ ದಿನ ಹೊಸತು..


      -ಹರವು ಸ್ಫೂರ್ತಿಗೌಡ
ಮಾರಮ್ಮನ್ ಗುಡಿ

ಕಬ್ಬು ತೊಂಡೆ ಒತ್ತಕಂಡ್ ಹೈವಾಗಾ
ಹಸರು ಗರಿ ಮಧ್ಯದಿಂದ ಇಣಕಿ ನೋಡ್ದೇ
ಮೂರ್ ಕಳ್ದು ಆರು ಉಗಾದಿ ಬಂದೋ
ಇನ್ನೋದ್ ಗಿತ ಬಾರೋ
ತೊಂಡೆ ಒತ್ತಕಂಡು ನಮ್ಮ ಬೀದಿ ಕಡೆಗೆ


ಅಸಿಗೆ ಮೈತೊಳಿವಾಗ ಮೈ ಉಜ್ಜುತ್ತಿದ್ ಉಲ್ ಗೆ
ನೀರ್ ಅದಿ ಮಕ್ಗೀಗ್ ನೀರ್ ಎರ್ಚ್ ದೋನೆ
ನೀರ್ ಒಳಗೆ ಕಾಣದಂಗಾದ ಸೌಟು ತಕೊಟ್ಟೋನೆ
ಎರಡ್ ಮಳ್ಗಾಲ ಕಳ್ದು ನಾಲ್ಕ್ ಸತಿ ಹಳೆ ಕಾವಲಿಗೆ ನೀರ್ ಬುಟ್ಟರು
ಬೆಳಗುದ್ದ ತಪಲಿ ಬೆಳಿಕಡು ಕೊಂತಿವ್ನಿ
ಅಸ ಹೋಡ್ಕಂಡು ಇನ್ನೋಂದ್ ಗಿತ ಬಾರೋ ಕೆರೆ ಕಡೆಗೆ


ಕಿವುಡ್ ನಾರಾಯಣ ಬಂದ ಪ್ಯಾಟಿ ಗಂಡ್ ತಂದ
ಒಂದೇ ದೀಪಾವಳಿಗೆ ಕೊಟ್ಟಿ, ಕರ್ದೀ-ಕಳ್ಸುದ್ರು
ಆಸಾಢಕ್ಕೆ ಅವ್ವನ್ ಮ್ನಗೆ ಕಳ್ಸವರೇ..
ತೌವರ್ರೂರ್ ಹಬ್ಬದಾಗೆ ತಂಬಿಟ್ಟ ಆರತಿ ತರುವಾಗ ಕಂಡೆ
ಮಾರವ್ವನ್ಗೆ ಹಚ್ಚುದ್ ದೀಪದಾಗೆ ನನ್ನ ಕಣ್ಣೇರ್ ಕಂಡೆ
ತಮ್ಮಟೆ ಸದ್ದ ಇದ್ದರು ನನ್ನ ಗುಂಡಿಗೆ ಸದ್ದ್ ಗೊತ್ತ್ ಮಾಡ್ಕಂಡೆ


"ಒಂಟೋಗಣ" ಬಮ್ಮಿ
ತಡರಾತ್ರಿ ಬಾಯಿಬೀಗ ಚುಚ್ಚುಸ್ಕಳೊ ಹೊತ್ತಗೆ
ಗಾಡಿ ಕಟ್ಟಿ, ಒಣಹುಲ್ಲ್ ಹಾಸಕಂಡಿ ಕಾಯ್ತಾ ಕೊಂತಿರ್ತೀನಿ
ಊರ್ ಮುಂದ್ಲು ಮಾರಮ್ಮನ್ ಗುಡಿ ಮುಂದೆ


           -ಹರವು ಸ್ಫೂರ್ತಿಗೌಡ

ಮಂಗಳವಾರ, ಏಪ್ರಿಲ್ 2, 2013

ನಿರಾರ್ಥಕ

ಕಳೆದುಕೊಂಡ ನೆನಪುಗಳೆಷ್ಟೊ
ಮರಳಿ ಪಡೆವ ಬಯಕೆಗಳೆಷ್ಟೊ
ಕಾಣದ ಕೈಯ ಮೋಸವೆಷ್ಟೊ
ಮಡಿಲಲ್ಲಿ ಮಲಗಿದ ಕನಸುಗಳೆಷ್ಟೊ
ಕಣ್ಣೀರು ಹರಿಸದ ದು
ಮ್ಮಾವೆಷ್ಟೊ

ಅರಿಯದೆ..

ಎಲ್ಲಾ ಕಳೆದು...
ಏನೂ ಪಡೆಯದ..
ನಿರಾರ್ಥಕವಿಷ್ಟೆ?

- ಹರವು ಸ್ಫೂರ್ತಿಗೌಡ

ಕತ್ತರಿಸದಿರಿ ರೆಪ್ಪೆಗಳ

ಬಿತ್ತುವ ಬೆಳೆಗೆ ಬೆಲೆಯೇ ಇಲ್ಲ
ಉಳುವ ನೇಗಿಲಿಗೆ ಬೆವರ ಲೆಕ್ಕವಿಲ್ಲ
ಭತ್ತಕೊಯ್ಯವ ಕೈಗೆ ಅನ್ನವಿಲ್ಲ
ನೊರೆಹಾಲು ಕರೆದ ನನ್ನವ ತಣ್ಣಗಿಲ್ಲ
ಜಾಗತೀಕರಣಗಳೇ ಕಾಡದಿರಿ
ನನ್ನೂರ ಮಣ್ಣಿನ ರಸ್ತೆಯ ಕೇಳದಿರಿ
ಜೋಪಡಿ ಮನೆಗೆ ಕದವೇ ಇಲ್ಲ
ಮಲಗಿದರೆ ನೆಮ್ಮದಿ ನಿದ್ದೆಗೆ ಬರವಿಲ್ಲ
ಎಂದೋ ತಿಂದ ಅನ್ನದ ರುಚಿ ಉಳಿದಿಲ್ಲ
ರಣ ಹಸಿವೇ ನಮ್ಮ ಕಾಡದಿರಿ

ದುಡಿವದೇಹದ ಶಕ್ತಿಯ ಕೇಳದಿರಿ



ನನ್ನ ಜನ ಕಂಡ ಕನಸುಗಳೆಲ್ಲ
ನನಸಾಗದ ಕನಸುಗಳಿಗೆ ಭವಿಷ್ಯವಿಲ್ಲ
ಅಭಿವೃದ್ಧಿ ಗ್ರಹಣಗಳೇ ಬಾರದಿರಿ
ಮರಳಿ ಗುಡಿಸಿಲು ನಿದ್ದೆಯ ಕೇಳದಿರಿ
ಉತ್ತುವ ಭೂಮಿಯ ಹೊತ್ತೊಯ್ಯದಿರಿ


-ಹರವು ಸ್ಫೂರ್ತಿಗೌಡ