ಮಂಗಳವಾರ, ಏಪ್ರಿಲ್ 2, 2013

ಕತ್ತರಿಸದಿರಿ ರೆಪ್ಪೆಗಳ

ಬಿತ್ತುವ ಬೆಳೆಗೆ ಬೆಲೆಯೇ ಇಲ್ಲ
ಉಳುವ ನೇಗಿಲಿಗೆ ಬೆವರ ಲೆಕ್ಕವಿಲ್ಲ
ಭತ್ತಕೊಯ್ಯವ ಕೈಗೆ ಅನ್ನವಿಲ್ಲ
ನೊರೆಹಾಲು ಕರೆದ ನನ್ನವ ತಣ್ಣಗಿಲ್ಲ
ಜಾಗತೀಕರಣಗಳೇ ಕಾಡದಿರಿ
ನನ್ನೂರ ಮಣ್ಣಿನ ರಸ್ತೆಯ ಕೇಳದಿರಿ
ಜೋಪಡಿ ಮನೆಗೆ ಕದವೇ ಇಲ್ಲ
ಮಲಗಿದರೆ ನೆಮ್ಮದಿ ನಿದ್ದೆಗೆ ಬರವಿಲ್ಲ
ಎಂದೋ ತಿಂದ ಅನ್ನದ ರುಚಿ ಉಳಿದಿಲ್ಲ
ರಣ ಹಸಿವೇ ನಮ್ಮ ಕಾಡದಿರಿ

ದುಡಿವದೇಹದ ಶಕ್ತಿಯ ಕೇಳದಿರಿ



ನನ್ನ ಜನ ಕಂಡ ಕನಸುಗಳೆಲ್ಲ
ನನಸಾಗದ ಕನಸುಗಳಿಗೆ ಭವಿಷ್ಯವಿಲ್ಲ
ಅಭಿವೃದ್ಧಿ ಗ್ರಹಣಗಳೇ ಬಾರದಿರಿ
ಮರಳಿ ಗುಡಿಸಿಲು ನಿದ್ದೆಯ ಕೇಳದಿರಿ
ಉತ್ತುವ ಭೂಮಿಯ ಹೊತ್ತೊಯ್ಯದಿರಿ


-ಹರವು ಸ್ಫೂರ್ತಿಗೌಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ