ಭಾನುವಾರ, ಮಾರ್ಚ್ 2, 2014

ಈಜಬೇಕು ನೀಳ ಬೆನ್ನಲ್ಲಿ
1.
ನಿನ್ನ ನೀಳ ಬೆನ್ನಲ್ಲಿ ಈಜಬೇಕು
ಮೈಚಳಿ ಬಿಟ್ಟು ಆಳಕ್ಕೆ ಕುಸಿಯುತ
ಮುತ್ತು, ಹವಳ ನಿಧಿ ಹುಡುಕುವಂತೆ
ಭೋರ್ಗರೆವ ಯವ್ವನಕ್ಕೆ ಸಿಲುಕಿ ನಲುಗಲು
2.
ನಿನ್ನ ನೀಳ ಬೆನ್ನಲ್ಲಿ ಗಾಳಹಾಕಿ ಕೂರಬೇಕು
ಹೊಸ ನೀರ ಸ್ರವಿಸು, ಹಳೆ ಮೀನು ಸಿಗಲಿ
ಒಕ್ಕಳು ಸುಳಿ ಸೆಡುವುಗಳಲ್ಲಿ ಗುದ್ದಾಡಲು...
ಆಳ ಸೆಳತ ಏರಿಳಿತಗಳಿಗೆ ಸಿಕ್ಕಿ ಸೊಲೊಪ್ಪಲು
3.
ನಿನ್ನ ನೀಳ ಬೆನ್ನ ಸೌಂದರ್ಯಕ್ಕೆ ಬೊಗಸೆಯೊಡ್ಡಬೇಕು
ಪ್ರತಿ ಋತುವಿನಲ್ಲೂ ದಂಡೆಯಲ್ಲಿ ಕಾಯುತ
ಬೆಸಿಗೆ ಧಗೆಯಲ್ಲಿ ನಿನ್ನೊಡನೆ ಬೆವರಲು
ಚಳಿಯಲ್ಲಿ ಶಿಥಲೆ ತಳಕ್ಕೆ ಬಿಸಿಹರಿಸಲು
ತೂರಿ ಹರಿವವಳಿಗೆ 'ನಡು'ಬಂಡೆಯಾಗಲು
4.
ಕೊನೆಗೊಂದು ಬಾರಿ ಬಿಟ್ಟುಕೊಳ್ಳೆ
ನಿನ್ನದೇ ನೀಳ ಬೆನ್ನು ಬೇಕು
ಅಪ್ಪನ ನೆನಪಿಗೆ ಕೂಸುಮರಿ ಮಲಗಲಾದರು
-ಹರವು ಸ್ಫೂರ್ತಿಗೌಡ
ಕಾಡು ದೊರೆ ಹೆಣದ ಮುಂದೆ ಒಂದಿಷ್ಟು...

ಮುಲಾಜಿಲ್ಲದೆ ಬರೆದ ಡೆತ್ ನೋಟೊಂದು
ನೇತಾಡುವ ಹೆಣದ ಕೊರೆವ ರಕ್ತ ಹೀರುತ್ತಿತ್ತು
ಬೆಳ್ಳಿ ಉಂಗುದೊಳಗಿನ ನೀಲಿ ಹರಳಿನ ಫಳಕ್ಕೆ
ಕಣ್ಣೀರು ಸುರಿಸಿಕೊಂಡು

ಅವನೆಣದ ಮುಂದೆ ನಿಂತು ಶಯನ ಗೆಳತಿಯರು ಘೀಳಿಟ್ಟರು

ಚದುರಿದ ಕೂದಲೆಳೆಯಲಿ ಮೋಹಗೊಂಡು...
ಸಿಕ್ಕುಗಳಿಗೆ ಮುತ್ತಿಡುತ ಉಸಿರಾಡುವುದ ಮರೆಯುತ್ತಿದ್ದ
ಪ್ರತಿ ದಿನವೂ ತಪ್ಪದೇ ಬರುವ ಸೂರ್ಯನಷ್ಟು ಪ್ರಾಮಾಣಿಕನೇನಲ್ಲ
ಮಧುವೀರಿ ಹಾರುವ ದುಂಬಿ;
ಗರಿಕೆ ಮೇಲಿನ ವ್ಯಾಮೋಹಕ್ಕೆ ಊರು ಸುತ್ತುವ ಬಸವ

ಗೋರಿಗಳ ಮೇಲಿನ ಕಾಂಕ್ರೀಟಿನಂತಾಗಿದ್ದ
ಬರಡು, ಕಠಿಣೆದೆಯ ಮೇಲೆ ತುಳಸಿ ಕಟ್ಟೆಗಷ್ಟೇ ಯೋಗ್ಯತೆ
ಯಾವ ಹೂ ಗಿಡ, ಮರ ಬಳ್ಳಿಗಳನ್ನರಳಿಸಿ ನಗಿಸಲಾರ..
ಕೊಂದ ಹೆಂಡತಿಯರ ಮಕ್ಕಳ ಲೆಕ್ಕವು ಕೊತ್ತಿರಲ್ಲಿಲ
ತಲೆಬುಡದಲ್ಲೊಂದು ಮಣ್ಣು ದೀಪವಿಟ್ಟು ಸಂತಾಪ ಸೂಚಿಸುತ್ತಿದ್ದ
ಕಾಮಕ್ಕೆ ಕಾಣಿಸದಂತೆ ಪ್ರೇಮಕ್ಕೆ ಬಾಯಿ-ಮೌನ ನೀಡುತ್ತಿದ್ದ
ನೆನಪುಗಳಿಗೆ ದ್ರೋಹ ಮಾಡಿ ಮರೆತು ವಂಚನೆಯಂತಾಗುತ್ತಿದ್ದ
ಚೌಕಾಸಿಯಂತೆಲ್ಲ ಪ್ರೀತಿ ನಡೆಸಿ, ದಾರಿ ತಪ್ಪಿಸುತ್ತಿದ್ದ
ಅರ್ಧ ಸುಟ್ಟ ಸಿಗರೇಟಿನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕಾಲಿನಲ್ಲಿ ಹಿಸುಕುತ್ತಿದ್ದ
ಹಳೆ ಚಪ್ಪಲಿ ಮೇಲೆ ಕಣ್ಣುಹಾಕಿ ಚಪ್ಪಲಿಯ ಉಸಿರು ತೆಗೆಸಿ ಬಿಟ್ಟ

ಅವಳೊಬ್ಬಳಿಗೆ ಹೇಳುವುದೇನು ಇರಲ್ಲಿಲ, ಸಾಕಷ್ಟು ಕೇಳಿಬೇಕಿದ್ದಳು
ನನ್ನೇಲ್ಲ ನಂಬಿಕೆಗಳನ್ನು ತಿರಸ್ಕರಿಸುತ್ತಿದ್ದ
ಭಗ್ನ ಪ್ರೇಮಿಯಂತೆ ಭಾವನೆಗಳನ್ನೇಲ್ಲ ಕೊಂದಿದ್ದ
ಸಂಬಂಧವಿಟ್ಟುಕೊಂಡ ಹೆಂಗಸಿನ ಹೆಸರನ್ನಾದರು ಕೇಳಬೇಕಿತ್ತು
ಪಾಪಗಳು ಅನ್ನುವುದಾದರೂ ಏನಿರಬಹುದು ಕೇಳಬೇಕಿತ್ತು

-ಹರವು ಸ್ಫೂರ್ತಿಗೌಡ
ನೆನೆದು ಕಣ್ಣು ತೆರೆದಂತೆಲ್ಲ
ಬೆಳಕ ಹನಿಗಳು ಸೋರುತಿಹುದು
ನಾ ಬದುಕಿದೊಂದು ಕ್ಷಣ ನಿನ್ನದಾಗಬೇಕಿದೆ
ನಾಳೆಗಳು ಏನಾಗಿದ್ದರೂ ನಿನ್ನೊಂದಿಗೆ ಇದ್ದರಾಯಿತ್ತು
ಉಸಿರಾಡಿದರ್ಧ ಭಾಗ ಗಾಳಿ ಉಳಿಸಿ ಕೊಡು
ನಾನೂ ಬದುಕ ಬೇಕು..

ಹೃದಯಕ್ಕೆ ಕಿವಿ ಬೆಳೆಯುತ್ತಿದೆ
ಸನಿಹಕ್ಕೆ ಓಡಿ ಬರುವ
ಧಮನಿ ಬಡಿತ ಕೇಳಿದಂತೆ...
ಆದರೂ ನೀ ಬಹಳ ದೂರ ಇದ್ದಿ ಬಿಡು..
ಎದ್ದೋಗಲು ಬಿಡಬಾರದಿತ್ತು
ನಿನ್ನಲಿ ನನ್ನನೇ ಕಾಣುತ್ತಿದ್ದ ಕ್ಷಣಗಳಲಿ..

ನನ್ನಿಂದ ನಿನ್ನ ಮುರಿದುಕೊಳ್ಳಬೇಕು
ಎದುರು ನಿಲ್ಲಿಸಿಕೊಂಡು ಸ್ಪರ್ಶಿ ನೋಡ ಬೇಕು
ನಿನ್ನ ದೇಹ, ಆತ್ಮ ಅನುಭವಿಸಬೇಕು
ನನ್ನ ಮರೆತಿರಬಹುದು, ನಾನೂ ನೆನೆಸಿಕೊಳ್ಳುತ್ತಿಲ್ಲ
ಕಾರಣಗಳೇಳುವ ಸಮಯವಲ್ಲ
ಬರುವುದಿಲ್ಲ ಕಾಯ್ದುಬಿಡು
ನಾನು ಒಂಟಿ ನಿನ್ನಂತೆ..

-ಹರವು ಸ್ಫೂರ್ತಿಗೌಡ
20-01-2014(6.20)
ಇತಿಹಾಸಕ್ಕೊಂದು ಕ್ಷಮೆ ಬೇಡುತ್ತಾ

ಅದೇ ಗಂಡಸರು. ಬಬ್ಬರಾದ ಮೇಲೊಬ್ಬರು
ದಾಳಿ ಇಡುತ್ತಾರೆ, ನಂಬಿಸುತ್ತಾರೆ..
ಅತಿ ಬುದ್ಧಿವಂತೆ ಆರೊಗೆಂಟ್ ಹುಡುಗಿಗೆ
ಕುರಿಯಂತೆ ಹಳಕ್ಕೆ ಬೀಳುವದೊಂದು ಹುಚ್ಚಿಗೆ
ಕತ್ತಲೆಯ ದಿವ್ಯ ಸಾಮಾಧಾನ ಬೇಡವಾಗಿವೆ
ದೃಷ್ಟಿ ಹರವಿಕೊಳ್ಳುತ್ತದೆ.. ಗುಲಕಂಜಿ ಬೆಳಕಿಗೆ ಬಗೆಯುತ್ತೇನೆ

ಸಿಕ್ಕಾವು ಸಿಗಲಿ ಬೇಟೆಗಾರನಿಗೆ ಹೊಂಚು ಹಾಕುತ್ತೇನೆ...
ಒಂದಿಲೊಂದು ಬಣ್ಣ ಬಳಿಕೊಂಡು, ಆತ್ಮರತಿ ಬೇಡುತ್ತದೆ
ಸಾವು ಹೊರಗಿಂದ ಬರಲೊಲ್ಲುತ್ತದೆ,
ನಮ್ಮೊಳಗೆ ಸಾವ ಹಾದರ ಹುಟ್ಟಿಸಿಕೊಳ್ಳುತ್ತೇವೆ
ಮೂಲೆಯಲ್ಲಿ ದೀಪ ಇಟ್ಟು ಮುಖ ನೋಡದೆ ಕೂರುತ್ತೇವೆ
ಬೇಡ ಬೇಡವೆಂದೆ ಒಪ್ಪಿಕೊಂಡಿರುತ್ತೇವೆ

ಮುಂಜಾವು ಶುರುವಾಗಲು, ನಿಜ ರೂಪಕ್ಕೆ ದೇಹ ತಿರುಗುತ್ತದೆ
ಗಾಯಗಳು ಗುಣವಾದಂತೆ ತೋರಿ ಗುರುತು ಉಳಿಸಿ ಕೆಮ್ಮುತ್ತದೆ
420 ಸೆಕ್ಷನ್ ಅಡಿಯಲ್ಲಿ ಸಾಕ್ಷಿಗೆ ಆತ್ಮಗಳನ್ನು ಏಳೆದು ಕೋರಿಸುತ್ತೇವೆ
ಆಟಗಳಿಗೆಲ್ಲಾ ಸಂತಾಪ ಸೂಚಿಸಿ ನರಿ ಊಳಿಡುತ್ತದೆ
ಬೊಗಸೆ ನೀರಿನಲ್ಲಿ ಮೀನು ಉಳಿಸಿಕೊಳ್ಳುವ ಹೋರಟವಿದೆ
ಬಿಟ್ಟೂ ಹೊಗಲಾರದೆ ತೂತು ಕೈಯಲ್ಲೇ ಪ್ರಾಣ ಕೊಟ್ಟು ಬಿಡುತದ್ದೆ

ಸ್ರ್ಮಿಮ್ಆಫ್ ಬಾಟ್ಲಿ ಬಿಚ್ಚಿದೆದೆಯಾಗುತ್ತಾಳೆ
ಒಂದೊಂದೇ ಹನಿ ಇಳಿಯುತ ದಾಹ ಹೆಚ್ಚಿಸುತದೆ
ನನ್ನಳಗೆ ಇದ್ದ ಒಬ್ಬ ಹತ್ಯೆಯಾಗುತ್ತಾನೆ
ಬುದ್ಧನಂತೆ ನಗುತ್ತಾನೆ, ನೆಮ್ಮದಿಯಲ್ಲಿ ಆನಾಥವಾಗುತ್ತೇನೆ

ನಿನ್ನದೊಂದು ಸಾವಿಗೆ ಹಂಬಲಿಸುತ್ತೇನೆ..
ಎಲ್ಲಾ ಚಿಗುರು, ಕವಲು, ಬೇರುಗಳ ಉಳುತ್ತೇನೆ
ದಿನ ಕಳೆದು ಗುದ್ದದಿಂದ ಹೊರತೆಗೆದ ಹೆಣದ ಮುಂದೆ ಚಡಪಡಿಸುತ್ತೇನೆ
ಸಿಬಿರುಗಳು ಮತ್ತೆ ಎದಿರುತ್ತವೆ, ನಿನ್ನಾತ್ಮಕ್ಕೆ ಹಪಹಪಿಸುತಲೇ ಇರುತ್ತೇನೆ

-ಹರವು ಸ್ಫೂರ್ತಿಗೌಡ
ನನ್ನದೆನ್ನುವುದೆಲ್ಲಿ?

ಪ್ರೀತಿ ಕನವರಿಕೆ ಬೆಚ್ಚಗಾಗಿಸುತ್ತಿದ್ದವು
ನೆಮ್ಮದಿಯನ್ನೂ ತರುತಿದ್ದವು
ಅನುಮಾನಗಳನ್ನ ಕಳೆದಿರಲಿಲ್ಲ
ಎಚ್ಚರಗೊಂಡಂತೆ ಕಾಡುತ್ತಿದ್ದವು
ಕತ್ತಲೆಯ ನಿಗೂಢ ಪ್ರಶ್ನೆಗಳಾಗಿ

ಬೆಳಕಾಗಿ ಬಿಡು ಸೂರ್ಯನಂತೆ
ಪಾರದರ್ಶನಿಕೆ; ಪ್ರಕಾಶಿಸು, ಅರಳಿಸು...
ಅನಾಥವಿದು ಹೃದಯ ಆಲಿಂಗನಕೆ
ಬೆಳದಿಂಗಳ ಮಂದ ಬೆಳಕು ವಿರಹಕಷ್ಟೇ
ಶಾಖ ಬೆವರಿಳಿಸಲಾರವು

ಕತ್ತಲೆಯೊಳಗಿನ ದಿವ್ಯ ಸಮಾಧಾನಿ
ಅದರೊಳಗೆಯೇ ನಿನ್ನ ಸ್ಪರ್ಶ
ಬೆಳಕಿನೊಂದಿಗೆ ತೆರೆದುಕೊಳ್ಳಲಿಲ್ಲ
ಮೋಕ್ಷ ನೀಡಿ ಮೈಯೇರಲಿಲ್ಲ
ಬೆಳಕೂ ಹರಿಯಿತು ನಮ್ಮ ನಮ್ಮ ದಾರಿಗೆ

-ಹರವು ಸ್ಫೂರ್ತಿಗೌಡ
25-01-2014 (2.30 am)
ಪ್ರೀತಿ ಕಾಮವನ್ನ ಬಯಸುವುದಲ್ಲ
ಕಾಮವೂ ಪ್ರೀತಿ ಬಯಸುತ್ತದೆ
love to aspire lust
lust need love
-ಹರವು ಸ್ಫೂರ್ತಿಗೌಡ
ಅವಲಂಬನೆ ಬೇಕಿತ್ತು ನೋಡು
ಬರುವುದೆಲ್ಲವ ತಬ್ಬಬೇಕಾಯಿತು
ಹೂವೋ-ಮುಳ್ಳೋ ಎದೆ ನೋವಿಗೆ ಗೊತ್ತು!!

required recourse, embosom the arrival
bosom knows arrival is flower or aculeus...

-ಹರವು ಸ್ಫೂರ್ತಿಗೌಡ
ನಿನ್ನ ದನಿಯೊಂದು ದಿನ ಹಕ್ಕಿಯ ನಿನಾದವಾಗಲಿದೆ
ರೋಮ ಪುಳಕಗೊಂಡು ಕಣ್ಣುಗಳ ಬೆಳಕು ಬೆತ್ತಲಾಗುತ್ತವೆ
ಚಂದಿರನ ದಿಕ್ಕಿಗೆ ಮುಖಮಾಡಿ ಹೊರಟುಬಿಟ್ಟೆ
ನಿನ್ನ ದಿಗಂತಗಳ ಕೇಳಬೇಕು ನಿಲ್ಲು..
ನಿನ್ನ ಆಲಾಪಗಳು ನನ್ನ ಹೃದಯ ಗೀತೆಯಾಗುತ್ತಿವೆ..
...
ಭ್ರಾಂತಿಯೇನು ನನ್ನ ಪ್ರೀತಿ..?
ಬಯಕೆಗಳ ತೀವ್ರತೆಗೆ ನಿರ್ಲಿಪ್ತ ನಡುರಾತ್ರಿ ನಡೆದೆ
ಆಸೆಗೆ ದುಃಖ ನೀಡಿ ಶಾಂತಿಧೂತನಾಗಿದ್ದು ಹೇಗೆ
ನಿನ್ನ ಪಾಲಿ ಭಾಷೆಗಳು ಗೊತ್ತಿಲ್ಲ ಬಿಡು
ಅನುರಾಗಗಳ ಎಚ್ಚರ ಸ್ಥಿತಿ ಅವಲೋಕಿತ ಧಮ್ಮಗಳು
ಅಸಹನೆ ನಡಿಗೆಗಳು ಸುಳ್ಳಿರಬಹುದು ವೈರಾಗ್ಯವಲ್ಲ
ಜಂಗಮ ಕಾಲುಗಳು ಕಾದ ಹೃದಯಗಳಿಂದ ಸುಡಬೇಕಿದ್ದವು
ಪಾದಗಳೇ ಹಾರುವ ಮುನ್ನ ಕೆಂಡದೂವುಗಳ ಮೇಲೆ ಕೂತುಹೋಗು
ಕಾಲಿಟ್ಟ ಬಂಡೆಯಲ್ಲಿ ಝರಿ ಹರಿಯಿತು
ಪಾದ ಚಿಟ್ಟೆ ಕೂತ ಕೆಂಡದೂವು ಜ್ವಲಿಸಿ ಬೆಳಗಾಯಿತ್ತು
ಎಲ್ಲರೂ ಮಣ್ಣು ಸೇರಿದೆವು; ಉತ್ತಿದಂತೆ ಘಾಸಿಗೊಳ್ಳುತ್ತಿದ್ದೆವು
ಎದೆ ಗಾಯಗಳು ಬೀದಿ ಅಲೆಯುತ್ತ ನಿನ್ನ ಹುಡುಕುತಿವೆ
ನೀನೂ ಮಣ್ಣಾದೆ; ನಿನ್ನ ಎದೆಯನ್ನ ಉಳುತ್ತಿದ್ದಾರೆ
ಉತ್ತಿದೆಂತಲ್ಲಾ ಮೊಳಕೆಯೊಡೆದೆ
ಪ್ರೀತಿ ಆತ್ಮ ಎದೆಯೊಳಗೆ ಇಸಿರಿಕೊಂಡೆದ್ದೆ ಬೋಧಿವೃಕ್ಷವಾಗಿ ಬೆಳೆದೆ
ಸೋಲು, ನೋವುಗಳ ಕಂಡು ತಟಸ್ಥನಾಗಿ ಅರೆಗಣ್ಣ ನಗುವೇಕೆ
ಬಾಯಿಬಿಟ್ಟು ಹೇಳಿದರೆ ಬರಿ ಸದ್ದಷ್ಟೇ ಕೇಳುತ್ತಿದೆ
ಭಾವರ್ಥಗಳ ಹೂ ಬಿರಿದು ಘಮ್ಮೆಂದದ್ದು ಸೊಕದೆ ಹೊಯ್ತು
ನಿನ್ನಷ್ಟೇ ಪ್ರೀತಿಸಿ ಭಗ್ನಳಾದೆ, ನೀ ಜಗತ್ತನೇ ಪ್ರೀತಿಸಿ ಬುದ್ಧನಾದೆ

ಬೆಳಗಾಯಿತು,
ನನ್ನದಷ್ಟೇಯಲ್ಲ ಎಲ್ಲಾ ವಿರಹಿಗಳ ರೆಕ್ಕೆ ಬಿಚ್ಚಿವೆ
ನಿನ್ನ ದಿಗಂತಗಳ ಕೇಳಬೇಕು, ನಿಲ್ಲು..
ನಿನ್ನ ಆಲಾಪಗಳು ನಮ್ಮೆಲ್ಲರ ಹೃದಯ ಗೀತೆಯಾಗುತ್ತಿವೆ..
-ಹರವು ಸ್ಫೂರ್ತಿಗೌಡ
ಹೃದಯಕ್ಕೆ ನೋವಿಲ್ಲದ ಮೇಲೆ
ನೀನಿಲ್ಲದಿರುವುದು ಖಾತ್ರಿಯಾಯ್ತು
ನೋವ ಕಳೆದುಕೊಂಡು ದುಃಖಿಯಾದೆ
-ಹರವು ಸ್ಫೂರ್ತಿಗೌಡ
(17-2-14, 2pm)
ಕತ್ತಲೆಯ ನಿದ್ದೆಯಲ್ಲಿ
ನನ್ನ ಬೆರಳಿಗೆ ಮೆತ್ತಿಕೊಂಡ
ನಿನ್ನ ಉಸಿರ ತಡಕಾಡಿದೆ
ಬೆಳಗ್ಗೆ ಎದ್ದ ಕೂಡಲೇ
ಕಣ್ಣೀರು ಹರಳುಗಟ್ಟಿ ಉದುರಿದವು...
-ಹರವು ಸ್ಫೂರ್ತಿಗೌಡ
22-02-14
(10.40am)
ನಮ್ಮ ನಡುವೆ ಸಾವಿರ ಮೌನ ಪರ್ವಗಳಿರಬಹುದು
ನಾನು ಆ ಕ್ಷಣ ಬದುಕಿದ್ದಕ್ಕೆ..
ನೀ ಉಸಿರಾಡಿದ್ದೇ ಸಾಕ್ಷಿ..

-ಹರವು ಸ್ಫೂರ್ತಿಗೌಡ
(5.23 am) 28-02-14