ಭಾನುವಾರ, ಮಾರ್ಚ್ 2, 2014

ಇತಿಹಾಸಕ್ಕೊಂದು ಕ್ಷಮೆ ಬೇಡುತ್ತಾ

ಅದೇ ಗಂಡಸರು. ಬಬ್ಬರಾದ ಮೇಲೊಬ್ಬರು
ದಾಳಿ ಇಡುತ್ತಾರೆ, ನಂಬಿಸುತ್ತಾರೆ..
ಅತಿ ಬುದ್ಧಿವಂತೆ ಆರೊಗೆಂಟ್ ಹುಡುಗಿಗೆ
ಕುರಿಯಂತೆ ಹಳಕ್ಕೆ ಬೀಳುವದೊಂದು ಹುಚ್ಚಿಗೆ
ಕತ್ತಲೆಯ ದಿವ್ಯ ಸಾಮಾಧಾನ ಬೇಡವಾಗಿವೆ
ದೃಷ್ಟಿ ಹರವಿಕೊಳ್ಳುತ್ತದೆ.. ಗುಲಕಂಜಿ ಬೆಳಕಿಗೆ ಬಗೆಯುತ್ತೇನೆ

ಸಿಕ್ಕಾವು ಸಿಗಲಿ ಬೇಟೆಗಾರನಿಗೆ ಹೊಂಚು ಹಾಕುತ್ತೇನೆ...
ಒಂದಿಲೊಂದು ಬಣ್ಣ ಬಳಿಕೊಂಡು, ಆತ್ಮರತಿ ಬೇಡುತ್ತದೆ
ಸಾವು ಹೊರಗಿಂದ ಬರಲೊಲ್ಲುತ್ತದೆ,
ನಮ್ಮೊಳಗೆ ಸಾವ ಹಾದರ ಹುಟ್ಟಿಸಿಕೊಳ್ಳುತ್ತೇವೆ
ಮೂಲೆಯಲ್ಲಿ ದೀಪ ಇಟ್ಟು ಮುಖ ನೋಡದೆ ಕೂರುತ್ತೇವೆ
ಬೇಡ ಬೇಡವೆಂದೆ ಒಪ್ಪಿಕೊಂಡಿರುತ್ತೇವೆ

ಮುಂಜಾವು ಶುರುವಾಗಲು, ನಿಜ ರೂಪಕ್ಕೆ ದೇಹ ತಿರುಗುತ್ತದೆ
ಗಾಯಗಳು ಗುಣವಾದಂತೆ ತೋರಿ ಗುರುತು ಉಳಿಸಿ ಕೆಮ್ಮುತ್ತದೆ
420 ಸೆಕ್ಷನ್ ಅಡಿಯಲ್ಲಿ ಸಾಕ್ಷಿಗೆ ಆತ್ಮಗಳನ್ನು ಏಳೆದು ಕೋರಿಸುತ್ತೇವೆ
ಆಟಗಳಿಗೆಲ್ಲಾ ಸಂತಾಪ ಸೂಚಿಸಿ ನರಿ ಊಳಿಡುತ್ತದೆ
ಬೊಗಸೆ ನೀರಿನಲ್ಲಿ ಮೀನು ಉಳಿಸಿಕೊಳ್ಳುವ ಹೋರಟವಿದೆ
ಬಿಟ್ಟೂ ಹೊಗಲಾರದೆ ತೂತು ಕೈಯಲ್ಲೇ ಪ್ರಾಣ ಕೊಟ್ಟು ಬಿಡುತದ್ದೆ

ಸ್ರ್ಮಿಮ್ಆಫ್ ಬಾಟ್ಲಿ ಬಿಚ್ಚಿದೆದೆಯಾಗುತ್ತಾಳೆ
ಒಂದೊಂದೇ ಹನಿ ಇಳಿಯುತ ದಾಹ ಹೆಚ್ಚಿಸುತದೆ
ನನ್ನಳಗೆ ಇದ್ದ ಒಬ್ಬ ಹತ್ಯೆಯಾಗುತ್ತಾನೆ
ಬುದ್ಧನಂತೆ ನಗುತ್ತಾನೆ, ನೆಮ್ಮದಿಯಲ್ಲಿ ಆನಾಥವಾಗುತ್ತೇನೆ

ನಿನ್ನದೊಂದು ಸಾವಿಗೆ ಹಂಬಲಿಸುತ್ತೇನೆ..
ಎಲ್ಲಾ ಚಿಗುರು, ಕವಲು, ಬೇರುಗಳ ಉಳುತ್ತೇನೆ
ದಿನ ಕಳೆದು ಗುದ್ದದಿಂದ ಹೊರತೆಗೆದ ಹೆಣದ ಮುಂದೆ ಚಡಪಡಿಸುತ್ತೇನೆ
ಸಿಬಿರುಗಳು ಮತ್ತೆ ಎದಿರುತ್ತವೆ, ನಿನ್ನಾತ್ಮಕ್ಕೆ ಹಪಹಪಿಸುತಲೇ ಇರುತ್ತೇನೆ

-ಹರವು ಸ್ಫೂರ್ತಿಗೌಡ

1 ಕಾಮೆಂಟ್‌: