ಭಾನುವಾರ, ಮಾರ್ಚ್ 2, 2014

ಕಾಡು ದೊರೆ ಹೆಣದ ಮುಂದೆ ಒಂದಿಷ್ಟು...

ಮುಲಾಜಿಲ್ಲದೆ ಬರೆದ ಡೆತ್ ನೋಟೊಂದು
ನೇತಾಡುವ ಹೆಣದ ಕೊರೆವ ರಕ್ತ ಹೀರುತ್ತಿತ್ತು
ಬೆಳ್ಳಿ ಉಂಗುದೊಳಗಿನ ನೀಲಿ ಹರಳಿನ ಫಳಕ್ಕೆ
ಕಣ್ಣೀರು ಸುರಿಸಿಕೊಂಡು

ಅವನೆಣದ ಮುಂದೆ ನಿಂತು ಶಯನ ಗೆಳತಿಯರು ಘೀಳಿಟ್ಟರು

ಚದುರಿದ ಕೂದಲೆಳೆಯಲಿ ಮೋಹಗೊಂಡು...
ಸಿಕ್ಕುಗಳಿಗೆ ಮುತ್ತಿಡುತ ಉಸಿರಾಡುವುದ ಮರೆಯುತ್ತಿದ್ದ
ಪ್ರತಿ ದಿನವೂ ತಪ್ಪದೇ ಬರುವ ಸೂರ್ಯನಷ್ಟು ಪ್ರಾಮಾಣಿಕನೇನಲ್ಲ
ಮಧುವೀರಿ ಹಾರುವ ದುಂಬಿ;
ಗರಿಕೆ ಮೇಲಿನ ವ್ಯಾಮೋಹಕ್ಕೆ ಊರು ಸುತ್ತುವ ಬಸವ

ಗೋರಿಗಳ ಮೇಲಿನ ಕಾಂಕ್ರೀಟಿನಂತಾಗಿದ್ದ
ಬರಡು, ಕಠಿಣೆದೆಯ ಮೇಲೆ ತುಳಸಿ ಕಟ್ಟೆಗಷ್ಟೇ ಯೋಗ್ಯತೆ
ಯಾವ ಹೂ ಗಿಡ, ಮರ ಬಳ್ಳಿಗಳನ್ನರಳಿಸಿ ನಗಿಸಲಾರ..
ಕೊಂದ ಹೆಂಡತಿಯರ ಮಕ್ಕಳ ಲೆಕ್ಕವು ಕೊತ್ತಿರಲ್ಲಿಲ
ತಲೆಬುಡದಲ್ಲೊಂದು ಮಣ್ಣು ದೀಪವಿಟ್ಟು ಸಂತಾಪ ಸೂಚಿಸುತ್ತಿದ್ದ
ಕಾಮಕ್ಕೆ ಕಾಣಿಸದಂತೆ ಪ್ರೇಮಕ್ಕೆ ಬಾಯಿ-ಮೌನ ನೀಡುತ್ತಿದ್ದ
ನೆನಪುಗಳಿಗೆ ದ್ರೋಹ ಮಾಡಿ ಮರೆತು ವಂಚನೆಯಂತಾಗುತ್ತಿದ್ದ
ಚೌಕಾಸಿಯಂತೆಲ್ಲ ಪ್ರೀತಿ ನಡೆಸಿ, ದಾರಿ ತಪ್ಪಿಸುತ್ತಿದ್ದ
ಅರ್ಧ ಸುಟ್ಟ ಸಿಗರೇಟಿನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕಾಲಿನಲ್ಲಿ ಹಿಸುಕುತ್ತಿದ್ದ
ಹಳೆ ಚಪ್ಪಲಿ ಮೇಲೆ ಕಣ್ಣುಹಾಕಿ ಚಪ್ಪಲಿಯ ಉಸಿರು ತೆಗೆಸಿ ಬಿಟ್ಟ

ಅವಳೊಬ್ಬಳಿಗೆ ಹೇಳುವುದೇನು ಇರಲ್ಲಿಲ, ಸಾಕಷ್ಟು ಕೇಳಿಬೇಕಿದ್ದಳು
ನನ್ನೇಲ್ಲ ನಂಬಿಕೆಗಳನ್ನು ತಿರಸ್ಕರಿಸುತ್ತಿದ್ದ
ಭಗ್ನ ಪ್ರೇಮಿಯಂತೆ ಭಾವನೆಗಳನ್ನೇಲ್ಲ ಕೊಂದಿದ್ದ
ಸಂಬಂಧವಿಟ್ಟುಕೊಂಡ ಹೆಂಗಸಿನ ಹೆಸರನ್ನಾದರು ಕೇಳಬೇಕಿತ್ತು
ಪಾಪಗಳು ಅನ್ನುವುದಾದರೂ ಏನಿರಬಹುದು ಕೇಳಬೇಕಿತ್ತು

-ಹರವು ಸ್ಫೂರ್ತಿಗೌಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ