ಬುಧವಾರ, ಏಪ್ರಿಲ್ 10, 2013

ಬದಲಾದಂತೆ ಭಾವ

1. ಅವನ ಭಾವ

ಚುಂಬಕ ಮೊಗ್ಗು
ನಾಚಿಕೆ ಕರೆಸಿ
ಹೂವಿನ ನಗು ಆಕಳಿಸಿ ಅರಳಿನಿಂತಂತೆ
ಮಾತಿನ ಬಿಸಿಲರಶ್ಮಿಗೆ
ನಗು ಬರಿಸಿ..

ಉನ್ಮಾದ ಕರೆಸಿ..
ಕಿವಿ ರೋಮ ಪುಳಕಗೊಂಡಂತೆ
ನಡುನತ್ತಿಯ ಸೂರ್ಯಕ್ಕೆ
ಚುರುಕು ಬೆಳಕಲಿ ಎಲ್ಲಾ ತಿಳಿದಂತೆ
ಅರಳುವಿಕೆಯ ಅರ್ಥ

ಬಿರಿಯುವುದರಲ್ಲಿ ಏನಿನ್ನಲ್ಲ ವಿಶೇಷತೆ
ಸಮಷ್ಠಿಯೂ ಸಿಕ್ಕ ಗೆಲುವಿನ ಮದ
ಅರಳಿ ನಾಚಿದ ಪ್ರತಿ ಪಳಿಕೆ ಆಳ ಅರಿತ
ಅವನದೇ ರಶ್ಮಿಗೆ ಅರಳಿದ ಹೂ ಅದು
ಅವನಿಗೇನು ಹೊಸತನ ನೀಡಲಿಲ್ಲ ಮತ್ತೆ ಮತ್ತೆ
ಪಶ್ಚಿಮಕ್ಕಿತ್ತು ಅವನ ಮುಖ
ಸಂಜೆಗೆ ಕರಗುವ ಮುನ್ನವೂ
ಕಣ್ಣಾಯಿಸಲಿಲ್ಲ
ಕಡಲ ಕಿನ್ನಾರೆಗಳಿಗೆ ಗುಸುಕಿದನಂತೆ
ಅರುಣೋದಯಕ್ಕೆ ಅರಳಿದವಳಲ್ಲಿ
ಸಂಧ್ಯಕ್ಕೆ ಹೊಸತೇನಿಲ್ಲ


2. ಅವಳ ಭಾವ

ಪ್ರೀತಿ ಹಣ್ಣು ತಿಂದು ಉಗಿದರು
ಒಡೆದು, ಚಿಗುರಿ, ಮೌನವಾಗುವಿಕೆಯಲ್ಲಿ..
ಹೃದಯದಲ್ಲಿ ಬಿತ್ತಿದ ಬೀಜದಂತೆ
ಪ್ರತಿ ಕಣದಲ್ಲೂ ವಿಶಿಷ್ಠತೆ ಸಾರುವ ಅರಳಿಯಂತೆ
ತನ್ನ ಒಡಲಲ್ಲಿ ಮತ್ತೊಂದು ಸಾಕುವ ಬಸುರಿಮರದಂತೆ
ಅಂತರಾಳಕ್ಕೆ ಭಾವಗಳ ಬೇರಿಳಿಸಿ ಬೆಳೆವ ಆಲದಂತೆ
ಮಣ್ಣ ಅಪ್ಪಿ ತಾನು ಬೆಳೆದು..
ತನ್ನತನವ ಗಟ್ಟಿಗೊಳಿಸುವ ಹೆಣ್ಣು ಜೀವಂತೆ
ಪ್ರತಿ ದಿನ ಹೊಸತು..


      -ಹರವು ಸ್ಫೂರ್ತಿಗೌಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ