ಸೋಮವಾರ, ಸೆಪ್ಟೆಂಬರ್ 2, 2013

ಕವಿತೆಗಳೇ ಹಾಗೆ..

ಮುರಿದ ಮನಸ್ಸಿನ ಶಬ್ದ
ಸುರಿದ ಕಣೀರಿನ ಸ್ಫೂರ್ತಿ
ಹಸಿದ ಬಗರಿ ಮೂಳೆ
ಕೊಂಕಿದ ಗಂಡಸಿನ ಬುದ್ಧಿ
‘ದಾನಿ’ಗಳ ಹಣದ ಧಿಮಾಕು
ಸಂತೆಯಲ್ಲಿ ಕಳೆದುಕೊಂಡ ಮಾನ
ಕೊಳೆಯುತ್ತಿರುವ ಹುಳುಕು ಸಮಾಜ
ಚುಡಾಯಿಸಿದ ಹುಡುಗನ ನೆನಪು...
ಕೈಗೆ ಎಟುಕದ ಚಂದ್ರ
ನಿರಾಕಾರಗೊಂಡ ಮುಗಲು ಗುಲಾಬಿ
ಕವಿತೆಗಳೇ ಹಾಗೆ..ಕವಿತೆಗಳೇ ಹಾಗೆ..
ನತದೃಷ್ಟ ಭಾವಗಳೇ ಯಶಸ್ವಿ ಕವಿತೆಗಳು

-ಹರವು ಸ್ಫೂರ್ತಿಗೌಡ
01-09-2013(4.6pm)

1 ಕಾಮೆಂಟ್‌:

  1. ಕವಿತೆಯಲ್ಲಿ ಬಳಸಿರುವ ಸಂಕೇತಗಳು ಅರ್ಥಪೂರ್ಣವಾಗಿವೆ. ಈ ಮೂಲಕ ಕವಿತೆ ಓದುಗರ ಮೆಚ್ಚುಗೆ ಗಳಿಸಿದೆ...

    ಪ್ರತ್ಯುತ್ತರಅಳಿಸಿ