ಮಂಗಳವಾರ, ಜನವರಿ 7, 2014

ಮೊದಲ ಸಲ ಅನಿಸುತ್ತಿದೆ
ನಾನು ಕಾದಿದ್ದೆ 4 ಗಂಟೆಯಾಗಲಿಕ್ಕೆ
ನೋಡದ ನನ್ನ ಅಕ್ಷರಕ್ಕೆ ಇಳಿಸಿದ್ದೆ
ಏನೋ ಸುದ್ದಿಗಳು, ಯಾರದ್ದೋ ಬಂಧನ
ಅಕ್ರಮ ಗಣಿಗಾರಿಕೆ; ಕೂಸ ಮೇಲೆ ಅತ್ಯಾಚಾರ
ಎಲ್ಲಾ ಸುದ್ದಿಗಳು ಕ್ಷಣ ಮೋದಲೇ ಹಾಕುವ ಆತುರ
ಮತ್ಯಾವ ಉಮೇದುಗಳು ಉಕ್ಕದ ಡ್ರೈ ಹಾರ್ಟ್
ಕನಿಷ್ಠ ಮೂರು ತಲೆ ಬೀಳಲೇ ಬೇಕು ಸುದ್ದಿಯ ಸಿಡಿಸಲು
ಒಂದು-ಎರೆಡು ಸಾವುಗಳುನ್ನ ಮುಲಾಜಿಲ್ಲದೆ ತಿರಸ್ಕರಿಸುತ್ತಿದ್ದೆ

ನಾನೂ ಕಾಯುತ್ತಿದ್ದೇನೆ 4ಗಂಟೆಯಾಗಲಿಕ್ಕೆ
ನನ್ನ ಬಗ್ಗೆ ಹೇಳುವ ಅಕ್ಷರಗಳ ಓದಿ ಬಿಡಲಿಕ್ಕೆ
ರಾಜಕಾರಣಿಗಳ ತಲೆಹರಟೆ ಸುದ್ದಿಗೋಷ್ಠಿಗಳ ಲೈವ್​ಗಳ ನಡುವೆ
ಭೂಕುಸಿತ; ಕರಾವಳಿಯಲ್ಲಿ ಚಂಡಮಾರುತ ಅಬ್ಬರ
ರೆಡ್ಕಾರ್ನರ್, ಲುಕ್​ಔಟ್ನೋಟಿಸಿಗಳು ಜಾರಿ
ಪೆಟ್ರೋಲ್​, ಬಿಳ್ಳಿ, ಚಿನ್ನದ ಬೆಲೆ ಏರಿಕೆ
ಉಗ್ರರ ದಾಳಿ; ಗ್ರಾಮಕ್ಕೆ ನಕ್ಸಲರ​ ಭೇಟಿ
ಹೈಕೋರ್ಟ್ತೀರ್ಪು-ಸುಪ್ರೀಂನಲ್ಲಿ ಮೇಲ್ಮನವಿ
ಸುದ್ದಿಗಳೊಂದಿಗೆ ದಿನ ಕಳೆದು ಬಿಡುತ್ತಿದ್ದ ಬಗ್ಗೆ ನಗು ನಿನಗೆ
ಉಪಮೇಯ, ರೂಪಕ, ಭಾವಬಂಧಗಳಿದ ಬಗ್ಗೆ ನಗುವೇನೋ

ನಾನೂ ಕಾಯುತ್ತಿದ್ದೇನೆ 4ಗಂಟೆಯಾಗಲಿಕ್ಕೆ
ಕತೆಗಾರನ ಕವಿತೆಗಳನ್ನು ಗಂಟುಗಳನ್ನು ಓದಲಿಕ್ಕೆ
-ಹರವು ಸ್ಫೂರ್ತಿಗೌಡ
(18-10-2013 10.40)

1 ಕಾಮೆಂಟ್‌:

  1. ಉಪಮೇಯ, ರೂಪಕ, ಭಾವಬಂಧಗಳಾಚೆ ಮಾದ್ಯಮದ ಗಿರಣಿಯಲ್ಲಿ ಕೆಳಕ್ಕೆ ಬಿದ್ದ ನಮ್ಮ ನಿಮ್ಮಂತಹ ಭಾವ ಜೀವಿಗಳ ತುಡಿತವೇ ಇದು.
    ನೂರು ಮನಸ್ಸಿನಾಳಕ್ಕೆ ಇಳಿಯದ ಸುದ್ದಿಗಳನ್ನು ಬೆರಳಚ್ಚಿಸಿದರೂ, ಒಂದು ಕವನದ ಸಾಲು ಹವಾ ನಿಯಂತ್ರಣ news desk ಅನ್ನೂ ಮೀರಿ ತಂಗಾಳಿಯಂತೆ ಸ್ಪರ್ಶಿಸಬಲ್ಲದು.

    ಪ್ರತ್ಯುತ್ತರಅಳಿಸಿ