ಮಂಗಳವಾರ, ಜನವರಿ 7, 2014

"ಧರ್ಮ"
ಅಚ್ಚಿನ ಮೊಳೆ ಖಾನೆಯಲ್ಲಿ ಸಿಕ್ಕಿ
ನಾನು ಹಿಂದೂ, ಕ್ರೈಸ್ತ, ಮುಸ್ಲೀಮನಾಗಿ
ವ್ಯಾಕರಣದ ವಿಭಕ್ತಿಗಳಷ್ಟೇ ನಿಸ್ಠೆಯಿಂದ
ಮಾರ್ಜಾಲ ಧರ್ಮಗಳನ್ನು ಪಾಲಿಸುತ್ತ

ಶೈಶವತನದಲ್ಲೇ ಮುಗ್ಧತೆ ಮುಗಿಸುವ ಧಾರ್ಮಿಕ ಪಾಠಗಳು
ಮೃದ್ವಸ್ಥಿ ಮೇಲೆ ನಕಾಶೆ ಬಿಡಿಸುವ ಕಲೆಯಂತೆ
ಧರ್ಮ ಉದ್ಘರಿಸುತ್ತಾ.. ಅಕಾರಾದಿಗಳಲ್ಲಿ
ಪ್ರಚೋದಿಸುತ್ತ, ಅರಳ ಬೇಯಿಸಿ ಕೈಯೆಣ್ಣೆ ಪಡೆ

ಕ್ರಿಸ್ತನ ಶತ್ರುವನ್ನು ಪ್ರೀತಿಸುವ ಕಲೆ ಕಲಿಯಲಿಲ್ಲ
ರಾಮನ ರಾಜ್ಯ ಪಾಲನೆ ಕಲಿಯದೆ ಭ್ರಷ್ಟರಾದಿರಿ
ಅಲ್ಲಾನ ಒಗಟ್ಟು ಕಲಿಯದೆ ಹೊಡೆದಾಡಿದಿರಿ
ಉಗ್ರ ಆಸೀಫ್​, ಕೋಮು ರಾಮ, ಪ್ರಚೋದಕ ಜೋಸೆಫ ಆದೆರೆಲ್ಲ

ಅಲ್ಲಾಹುವಿನ ರಾಸಯನಿಕ ದಹಿಸುತ್ತಿರುವ ದೇಶ ಉಳಿಸೆಂದೆ
ರಾಮನ ಮುಂದೆ ಸೀದು ಹೋದ ತ್ರಿಕರಣ ಶುದ್ಧಿಯ ಕೇಳಿದೆ
ಇಗರ್ಜಿ ಮುಂದೆ ಮುಂಬತ್ತಿ ಹಚ್ಚಿ ಕ್ರೈಸ್ತನ್ನನು ಎಳೆದಾಡಿದೆ
ಯಾವೊಬ್ಬ ದೇವನು ಉಸಿರಾಡಲಿಲ್ಲ
ಒಡೆದ ಹಡಗಿನಿಂದ ಜೀವಂತ ಉಳಿದವನಾದೆ
-ಹರವು ಸ್ಫೂರ್ತಿಗೌಡ

1 ಕಾಮೆಂಟ್‌:

  1. ಯಾವುದು ಧರ್ಮವೋ? ಯಾವುದು ಅಧರ್ಮವೋ? ಎಲ್ಲವೂ ಅವರವರ ಮೂಗಿನ ನೇರಕ್ಕೆ ವ್ಯಾಖ್ಯಾನವಾಗಿದೆ ಕಾಲಕಾಲಕ್ಕೇ.

    ultimate :
    " ಕ್ರಿಸ್ತನ ಶತ್ರುವನ್ನು ಪ್ರೀತಿಸುವ ಕಲೆ ಕಲಿಯಲಿಲ್ಲ
    ರಾಮನ ರಾಜ್ಯ ಪಾಲನೆ ಕಲಿಯದೆ ಭ್ರಷ್ಟರಾದಿರಿ
    ಅಲ್ಲಾನ ಒಗಟ್ಟು ಕಲಿಯದೆ ಹೊಡೆದಾಡಿದಿರಿ
    ಉಗ್ರ ಆಸೀಫ್​, ಕೋಮು ರಾಮ, ಪ್ರಚೋದಕ ಜೋಸೆಫ ಆದೆರೆಲ್ಲ"

    ಪ್ರತ್ಯುತ್ತರಅಳಿಸಿ